ಜ್ಞಾನಜ್ಯೋತಿ ಶ್ರೀ ಸಾಯಿಬಾಬಾ ಟ್ರಸ್ಟ್ (ರಿ)




ಭಾರತ ವಿಭಿನ್ನ ನಂಬಿಕೆ, ಆಚರಣೆಗಳ ನೆಲೆಬೀಡು. ಇಲ್ಲಿ ನೆಲೆಸಿದ ಸಾಧು ಸಂತರು, ಮಹಾನ್ ಪುರುಷರು ತಮ್ಮದೇ ವೆವಿಧ್ಯಮಯ ಸರಳ ಜೀವನ ಶೈಲಿಯಿಂದ, ಮಹಾನ್ ಸಾಧನೆಗಳಿಂದ, ಪವಾಡಗಳಿಂದ ಜನಮಾನಸದಲ್ಲಿ ಸ್ಥಾಯಿಯಾಗಿ ವಿರಾಜಮಾನರಾಗಿದ್ದಾರೆ. ಅಂತಹ ಪುಣ್ಯ ಪುರುಷರ ಸಾಲಿನ ಅಗ್ರಗಣ್ಯರಲ್ಲೊಬ್ಬರು ಶ್ರೀ ಶಿರಡಿ ಸಾಯಿ ಬಾಬಾ.ಎಲ್ಲ ಸಮುದಾಯಗಳಲ್ಲಿ ಏಕತೆ ಮತ್ತು ಸೌಹಾರ್ದತೆ ಮೂಡಿಸಲು ಶ್ರಮಿಸಿದ ಈ ಬಾಬಾರ ದೇವಸ್ಥಾನಗಳು ಇಂದು ದೇಶಾದ್ಯಂತ ತಲೆ ಎತ್ತಿವೆ. ಭಕ್ತರು ಅಲ್ಲಲ್ಲಿ ಬಾಬಾರ ದೇಗುಲ ನಿರ್ಮಿಸಿ ಕೃತಾರ್ಥರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಹನುಮಂತನಗರದ ಜ್ಞಾನಜ್ಯೋತಿ ಶ್ರೀ ಸಾಯಿಬಾಬಾ ಟ್ರಸ್ಟ್ ಕೂಡ ಕಾರ್ಯೋನ್ಮುಖವಾಗಿದೆ. ಹನುಮಂತನಗರ ಕೋ-ಆಪ್ರೇಟಿವ್ ಹೌಸಿಂಗ್ ಸೊಸೈಟಿ ನೀಡಿದ 32 ಗುಂಟೆ ಜಾಗದಲ್ಲಿ ಭವ್ಯವಾದ ಸಾಯಿಬಾಬಾ ಮಂದಿರ ನಿರ್ಮಿಸಲು ಉದ್ದೇಶಿಸಲಾಗಿದೆ. ಜೀವನದ ಏರಿಳಿತಗಳ ಬಗ್ಗೆ, ಜೀವಮಾನದ ಆಧ್ಯಾತ್ಮಿಕ ಸಾಧನೆಗಳ ಬಗ್ಗೆ, ಸಮರ್ಪಣಾ ಮನೋಭಾವದ, ಸೇವಾ ಮನೋಭಾವ, ಪರೋಪಕಾರ, ದಯಾಪರತೆ, ಕರ್ತವ್ಯ ನಿಷ್ಠೆ ಇನ್ನು ಮುಂತಾದ ಮಾನವೀಯ ಗುಣಗಳ ಬಗ್ಗೆ ಜಾಗತಿ ಮೂಡಿಸುವ ಸದುದ್ದೇಶದಿಂದ ಬಾಬಾರ ಆಶೀರ್ವಾದದೊಂದಿಗೆ ಈ ಮಂದಿರ ನಿರ್ಮಿಸಲಾಗುತ್ತಿದೆ, 60*80 ವಿಸ್ತೀರ್ಣದಲ್ಲಿ ಭವ್ಯ ಮಂದಿರ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದು ಪ್ರತಿ ಚದರ ಅಡಿಗೆ 3000 /-ರೂ ವೆಚ್ಚ  ತಗುಲಲಿದೆ. ಬಾಬಾರ ಸದ್ಭಕ್ತರು ಮತ್ತು ಕೊಡುಗೆ ದಾನಿಗಳು ಈ ಕೆಲಸಕ್ಕೆ ಕೆಜೋಡಿಸಲು ಈ ಮೂಲಕ ಕೋರಲಾಗಿದೆ. ಧಾರವಾಡದ ಆ್ಯಕ್ಸಿಸ್ ಬ್ಯಾಂಕ್ನಲ್ಲಿ ಟ್ರಸ್ಟ್ನ ಖಾತೆಯಿದ್ದು 918020005242616 ifsc code utib 0000603, utib0003559 ಆನ್ ಲೆನ್ ಮೂಲಕವೂ ಕಾಣಿಕೆ ಸಲ್ಲಿಸಬಹುದಾಗಿದೆ. ಭಕ್ತರು ಮರಳು, ಇಟ್ಟಿಗೆ, ಸಿಮೆಂಟ್, ಸ್ಟೀಲ್ ಹೀಗೆ ಯಾವುದಾದರು ವಸ್ತು ಅಥವಾ ಸಾಮಗ್ರಿ ರೂಪದಲ್ಲೂ ಕಾಣಿಕೆ ಸಲ್ಲಿಸಬಹುದಾಗಿದೆ. ಮೊದಲ ಹಂತವಾಗಿ ಸದ್ಯಕ್ಕೆ ಜಾಗದಲ್ಲಿ 20*20 ವಿಸ್ತೀರ್ಣದಲ್ಲಿ ಸ್ಟೋರ್ ರೂಂ,ಟ್ರಸ್ಟ್ ಕಚೇರಿಯನ್ನು ತಾತ್ಕಾಲಿಕವಾಗಿ ನಿರ್ಮಿಸಲಾಗುತ್ತಿದೆ. ಉದ್ದೇಶಿತ ಭವ್ಯ ಮಂದಿರ ನಿರ್ಮಾಣಕ್ಕೆ ಕೊಡುಗೆ ದಾನಿಗಳ ಸಹಾಯ ಸಹಕಾರ ಅತ್ಯಗತ್ಯವಾಗಿದ್ದು  ಎಲ್ಲರೂ ತನುಮನಧನದಿಂದ ಸೇವೆಗೆದು ಸದ್ಗುರುವಿನ ಪಾತ್ರಕ್ಕೆ ಭಾಜನರಾಗಲು ಕೋರಲಾಗಿದೆ.

ವಿ ಸೂಚನೆ: 50 ಸಾವಿರಕ್ಕೂ ಹೆಚ್ಚು ಸಹಾಯ ಮಾಡಿದವರನ್ನು ಮಹಾಪೋಷಕರೆಂದು ,25,000ಕ್ಕೂ ಮೇಲ್ಪಟ್ಟು  ಸಹಾಯ ಮಾಡಿದ ದಾನಿಗಳನ್ನು ಪೋಷಕರೆಂದು ಅದೇ ರೀತಿ 10,000ಕ್ಕೂ ಮೇಲ್ಪಟ್ಟು ಸಹಾಯ ಮಾಡಿದವರ ಹೆಸರನ್ನು ದೇವಸ್ಥಾನದ ದಾನಿಗಳ ನಾಮಫಲಕದಲ್ಲಿ ಹಾಕಲಾಗುವುದು.
Share: